ಆನೇಕಲ್ ಯೋಜನಾ ಪ್ರಾಧಿಕಾರವು ರಾಜ್ಯ ಸರ್ಕಾರದ ಆಡಳಿತಕ್ಕೆ ಒಳಪಟ್ಟು ಕಾರ್ಯ ನಿರ್ವಹಿಸುವ ಸ್ವಾಯತ್ತ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಪ್ರಾಧಿಕಾರದ ಕಛೇರಿಯು "ಅಣ್ಣ" ಸಂಖ್ಯೆ 430, ಹೆನ್ನಾಗರ ಗೇಟ್, ಹೊಸೂರು ಮುಖ್ಯರಸ್ತೆ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಆನೇಕಲ್ ಸ್ಥಳೀಯ ಯೋಜನಾ ಪ್ರದೇಶವು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತಿದ್ದು, ದಕ್ಷಿಣ ಭಾಗದಲ್ಲಿ ಬರುತ್ತದೆ. ಸರ್ಕಾರದ ಆದೇಶ ಸಂಖ್ಯೆ: ನಅಇ 151 ಬಿಎಂಆರ್ 2013 ದಿನಾಂಕ:03-09-2014ರನ್ವಯ ಆನೇಕಲ್ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಲಾದ ಮಹಾಯೋಜನೆ - 2031 ಇದಕ್ಕೆ ಅಂತಿಮ ಅನುಮೋದನೆ ನೀಡಲಾಗಿರುತ್ತದೆ.

 

ಮೂಲ: ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.